Winning entries could not be determined in this language pair.There were 2 entries submitted in this pair during the submission phase. Not enough entries were submitted for this pair to advance to the finals round, and it was therefore not possible to determine a winner.Competition in this pair is now closed. |
ಪ್ಯಾರಾಸೈಟ್ ಸಿನಿಮಾದಿಂದ ನಾನು ಪ್ರಭಾವಕ್ಕೊಳಗಾದೆ ಅನ್ನುವುದು ತೀರಾ ಸಾಧಾರಣ ಹೇಳಿಕೆಯಾಗಬಹುದು; ಟ್ರ್ಯಾಕಿಂಗ್ ಶಾಟ್ಗಳೊಂದಿಗೆ ಅದರ ಚಿತ್ರೀಕರಣದ ಶೈಲಿ ರೋಮಾಂಚನಕಾರಿಯಾಗಿದೆ. ಲಂಡನ್ನ ಕೊರಿಯನ್ ಫಿಲ್ಮ್ ಫೆಸ್ಟಿವಲ್ ಸಂದರ್ಭ ಹಲವಾರು ಕೊರಿಯನ್ ಸಿನಿಮಾಗಳನ್ನು ನೋಡಿದ್ದ ನನಗೆ ಅಂತಹ ಸಿನಿಮಾಗಳಲ್ಲಿ ಅಳವಡಿಸುವ ವಾಡಿಕೆಯ ಶೈಲಿಗಳ ಬಗ್ಗೆ ತಿಳಿದಿತ್ತು ಆದರೆ ಪ್ಯಾರಾಸೈಟ್ ಅವೆಲ್ಲವನ್ನೂ ಧಿಕ್ಕರಿಸುವಂತೆ ಕಂಡುಬಂತು! ಪ್ಯಾರಾಸೈಟ್ ತಮಾಷೆಯನ್ನು ಹೊಂದಿದೆ, ಚಮತ್ಕಾರಿ ರೀತಿಯಲ್ಲಿ, ರೋಮಾಂಚಕಾರಿ ಕೂಡ ಆಗಿದೆ, ವರ್ಗ ತಾರತಮ್ಯವನ್ನು ನಿಚ್ಚಳವಾಗಿ ತೋರಿಸುತ್ತದೆ ಮತ್ತು ಇತರ ಶೈಲಿಗಳ ಹಾಗೆ ಒಂದು ಕೌಟುಂಬಿಕ ಕಥೆಯ ಚಿತ್ರಣವನ್ನೂ ಒದಗಿಸುತ್ತದೆ ಹಾಗಾಗಿ ಎಲ್ಲ ವಯಸ್ಸಿನಗರಿಗೆ ಇದು ಇಷ್ಟವಾಗುವ ಸಾಧ್ಯತೆಯಿದೆ. ಪ್ಯಾರಾಸೈಟ್ನ ಸೂಕ್ಷ್ಮತೆಗಳು ಮತ್ತು ಮನಸೆಳೆಯುವ ಛಾಯಾಗ್ರಹಣವನ್ನು ಕಣ್ತುಂಬಿಕೊಳ್ಳಲು ಅದನ್ನು ಥಿಯೇಟರ್ನಲ್ಲಿ ನೋಡಬೇಕು. ಕುತೂಹಲವನ್ನು ಹಾಳುಮಾಡದೆ, ಸಾರಾಂಶ ಹೇಳುವುದಾದರೆ ಪ್ಯಾರಾಸೈಟ್ ಪಾರ್ಕ್ ಕುಟುಂಬ ಮತ್ತು ನಿರುದ್ಯೋಗಿಯಾದ ಕಿಮ್ ಕುಟುಂಬದ ನಡುವಿನ ಸಂವಹನದ ಕಥೆಯನ್ನು ಹೇಳುತ್ತದೆ, ಈ ಎರಡು ಕುಟುಂಬಗಳ ವ್ಯತಿರಿಕ್ತ ಜಗತ್ತುಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಪರಿಣಾಮಗಳೊಂದಿಗೆ ಮುಖಾಮುಖಿಯಾಗುತ್ತವೆ. […]ಒಳಾಂಗಣ ಸ್ಥಳದ ಪರಿಣಾಮಕಾರಿ ಬಳಕೆಯೊಂದಿಗೆ ಪ್ರಕಾಶಮಾನ ಶಾಟ್ಗಳ ಜೊತೆಗೆ ಬಾಂಗ್ ಜೂನ್-ಹೂ ಪ್ರೇಕ್ಷಕರ ಆಸಕ್ತಿಯನ್ನು ಹಿಡಿದಿಡಲು ಯಶಸ್ವಿಯಾಗುತ್ತಾರೆ ಮತ್ತು 2 ಗಂಟೆ 12 ನಿಮಿಷ ಅವಧಿಯ ಸಿನಿಮಾ ಮುಗಿದ ಬಳಿಕ ಬಹುತೇಕ ದೃಶ್ಯಗಳು ಪಾರ್ಕ್ ಕುಟುಂಬದ ಮನೆಯೊಳಗೆ ನಡೆಯುತ್ತವೆ ಎನ್ನುವುದು ಅರಿವಿಗೆ ಬಂದಾಗ ಅಚ್ಚರಿಯಾಗುತ್ತದೆ. ಬಾಂಗ್ ಜೂನ್ ಹೂ ಅವರ ಅಭಿರುಚಿಯನ್ನು ತೋರಿಸುವ ಕುತೂಹಲಕರ ದೃಷ್ಟಿಕೋನದೊಂದಿಗೆ ಸಾಂಸಾರಿಕ ಬದುಕಿನ ಪ್ರಾಪಂಚಿಕ ಅಂಶಗಳನ್ನು ಪ್ರದರ್ಶಿಸಲಾಗಿದೆ. ಇದು ನಿಧಾನಗತಿಯಲ್ಲಿದೆ ಆದರೆ ಪ್ಯಾರಾಸೈಟ್ ಒಂದೇ ಮಟ್ಟದಲ್ಲಿ ಇದ್ದರೂ ವಾಸ್ತವದಲ್ಲಿ ಅದು ಬಹುಪದರಗಳನ್ನು ಒಳಗೊಂಡಿದೆ ಮತ್ತು ಸಹಾನುಭೂತಿ ಹಾಗೂ ಸ್ಥೈರ್ಯದೊಂದಿಗೆ ಸಾಮಾಜಿಕ ನೈಜತೆಯನ್ನು ಚಿತ್ರಿಸುವ ಮೂಲಕ ಅದರ ಸೌಂದರ್ಯ ಮತ್ತು ಸಹಜತೆ ನಿಮ್ಮ ಮನಸೂರೆಗೊಳ್ಳುವಂತೆ ಮಾಡುತ್ತದೆ. ಪಾತ್ರವರ್ಗ ನೋಡಲು ಮನಮೋಹಕವಾಗಿದೆ, ಪ್ರತಿ ಮುಖದ ಚಲನೆ ಮತ್ತು ಕ್ರಿಯೆ ಪ್ರೇಕ್ಷಕರನ್ನು ಹಿಡಿದಿಡುತ್ತವೆ, ಮೆಟ್ಟಿಲನ್ನು ಹತ್ತುವುದು ಅಥವಾ ಇಳಿಯುವಂತಹ ಸಾಮಾನ್ಯ ನಟನೆಗಳು ಕೂಡ ಅಡಗಿರುವ ಅರ್ಥವನ್ನು ತಿಳಿಸಬಲ್ಲವು, ಇದನ್ನು ದೃಶ್ಯತುಣುಕುಗಳಲ್ಲಿ ಕ್ಯಾಮರಾ ಬಿಚ್ಚಿಡುತ್ತದೆ. ಸ್ಥಳಾವಕಾಶದ ಅತ್ಯುತ್ತಮ ಬಳಕೆ ಮತ್ತು ಅಸಾಮಾನ್ಯ ಕ್ಯಾಮರಾ ಕೋನಗಳು ಮತ್ತು ನಾಟಕೀಯ ಹವಾಮಾನ ಬದಲಾವಣೆಗಳು ಪ್ರೇಕ್ಷಕನ ಕಸಿವಿಸಿಯನ್ನು ಹೋಗಲಾಡಿಸುತ್ತವೆ. ಪ್ಯಾರಾಸೈಟ್ಗೆ ಅತಿವಾಸ್ತವಿಕತೆಯ ನಿಸರ್ಗವಿದ್ದು, ಅದನ್ನು ಹಿನ್ನೆಲೆ ಸಂಗೀತ ಎತ್ತಿತೋರಿಸುತ್ತದೆ ಮತ್ತು ಇಷ್ಟೇ ಅಲ್ಲದೆ ನಿಜಕ್ಕೂ ಸಿನಿಮೀಯ ಮಾಂತ್ರಿಕತೆಯಲ್ಲಿ ಹಿಡಿದಿಟ್ಟಿರುವ ಅಸಂಗತತೆಯ ಅಂಶಗಳನ್ನು ಸಿನಿಮಾ ಅಳವಡಿಸಿಕೊಂಡಿದೆ. ಪ್ಯಾರಾಸೈಟ್ನ ಸ್ಪಷ್ಟ ವಿಕಾರವು ನಿಮ್ಮನ್ನು ನಿಜಕ್ಕೂ ತಲ್ಲಣಗೊಳಿಸುತ್ತದೆ ಮತ್ತು ಟ್ವೈಲೈಟ್ ಝೋನ್ ರೀತಿಯ ಚಿತ್ರನಿರ್ಮಾಣಕ್ಕೆ ಹೋಲಿಸಿದರೆ ಸಹಜ ಅನ್ನಿಸುತ್ತದೆ. ನಟರು ತಮ್ಮ ಪಾತ್ರಗಳಲ್ಲಿ ಹೃದಯಸ್ಪರ್ಶಿಯಾಗಿದ್ದು ಸಹಜ ನಟನೆಯ ಮೂಲಕ ನಮ್ಮನ್ನು ಅವರಲ್ಲಿ ಕಾಣುವಂತೆ ಮಾಡುತ್ತಾರೆ. ಕಿ-ವೂ ಮತ್ತು ಕಿ-ಜಾಂಗ್ ಕಿಮ್ ಪಾರ್ಕ್ ಕುಟುಮಬದ ಮನೆಯಲ್ಲಿ ಖಾಸಗಿ ಶಿಕ್ಷಕರಾಗಿ ಕೆಲಸ ಮಾಡುತ್ತಿರುವಾಗ ಮೌನವಾದ, ಬಹುತೇಕ ಪೌರಾಣಿಕದಂತೆ ಕಾಣುವ ಕಲಿಸುವ ತಂತ್ರಗಳನ್ನು ಬಳಸಿಕೊಂಡು ಮಾಂತ್ರಿಕತೆಯ ಪ್ರಭಾವಳಿಯೊಂದಿಗೆ ಈ ಮಟ್ಟದ ನಿರ್ಲಕ್ಷಿತ, ಮಹತ್ವವಿಲ್ಲದ ಅಧಿಕಾರವನ್ನು ದಟ್ಟವಾಗಿ ಕಾಣಿಸುತ್ತಾರೆ. ಪ್ಯಾರಾಸೈಟ್ ಸಾಗುವ ವಿರುದ್ಧ ದಿಕ್ಕುಗಳಲ್ಲಿ ಕಿ-ವೂ ಮತ್ತು ಕಿ-ಜಾಂಗ್ ಆಗಿ ನಟರಾದ ಪಾರ್ಕ್ ಸೊ-ಡ್ಯಾಮ್ ಮತ್ತು ಚೊಯ್ ವೂ-ಸಿಕ್ ಅದ್ಭುತವಾಗಿ ನಟಿಸಿದ್ದಾರೆ ಮತ್ತು ಸುಲಲಿತವಾಗಿ ಈ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ತಲ್ಲೀನರಾಗುವಂತೆ ಮಾಡುತ್ತಾರೆ. […]ಅತ್ಯಂತ ನಿಪುಣತೆಯ ಸಿನಿಮಾನಿರ್ಮಾಣದ ಗಮನಾರ್ಹ ಉದಾಹರಣೆಯಾಗಿರುವ ಪ್ಯಾರಾಸೈಟ್ ನೋಡಲೇಬೇಕಾದ ಸಿನಿಮಾ ಮತ್ತು ಯುರೋಪ್ನಲ್ಲಿ ಅದು ಬಿಡುಗಡೆಯಾದಾಗ ನಾನು ಮತ್ತೊಮ್ಮೆ ಅದನ್ನು ವೀಕ್ಷಿಸಲು ಎದುರು ನೋಡುತ್ತಿದ್ದೇನೆ. | Entry #37214 — Discuss 0 — Variant: Not specified
|
ಪ್ಯಾರಾಸೈಟ್ (ಕನ್ನಡಾನುವಾದ : ಪರಾವಲಂಬಿ) ಚಲನಚಿತ್ರವು ನನ್ನನ್ನು ಆರಂಭದಿಂದ ಅಂತ್ಯದವರೆಗೂ ತನ್ನತ್ತ ಸೆಳೆದಿರಿಸಿಕೊಂಡಿತ್ತು ಎಂದಷ್ಟೇ ಹೇಳಿದರೆ ಅದು ನಿಜಕ್ಕೂ ಪರಿಪೂರ್ಣ ಹೇಳಿಕೆಯಾಗದು; ಚಲನಯುಕ್ತ ಚಿತ್ರೀಕರಣಗಳೊಂದಿಗಿನ ಅದರ ಚಿತ್ರೀಕರಣದ ಶೈಲಿಯು ಮಂತ್ರಮುಗ್ಧಗೊಳಿಸುವಂತಿದೆ. ಲಂಡನ್ನಲ್ಲಿ ಜರುಗಿದ ಕೊರಿಯನ್ ಚಲನಚಿತ್ರೋತ್ಸವದ ಅವಧಿಯಲ್ಲಿ ಹಲವಾರು ಕೊರಿಯನ್ ಚಲನಚಿತ್ರಗಳನ್ನು ವೀಕ್ಷಿಸಿರುವ ನನಗೆ, ಅಂತಹ ಚಲನಚಿತ್ರಗಳಲ್ಲಿ ನಿಯೋಜಿಸಲಾಗುವ ವಾಡಿಕೆಯೆನ್ನುವಂತಹ ಕಲೆ, ಸಂಗೀತ, ಅಥವಾ ಸಾಹಿತ್ಯದ ಶೈಲಿಗಳ ಪರಿಚಯವು ಇತ್ತಾದರೂ ಕೂಡ, ಪ್ಯಾರಾಸೈಟ್ ಅವೆಲ್ಲವುಗಳನ್ನೂ ಒಂದು ಕೈ ಮೀರಿಸುವಂತಿತ್ತು! ಚಮತ್ಕಾರಿಕವೆನಿಸುವಂತಹ ರೀತಿಯಲ್ಲಿ ಪ್ಯಾರಾಸೈಟ್ ವಿನೋದಭರಿತವಾಗಿದೆ, ಅದು ರೋಮಾಂಚಕಾರಿಯೂ ಆಗಿದೆ, ವರ್ಗ ವಿಭಜನೆಗಳನ್ನು ದೂರವಾಗಿಸುತ್ತದೆ ಹಾಗೂ ಇನ್ನಿತರ ಶೈಲಿಗಳ ಜೊತೆಗೆ ಸಾಂಸಾರಿಕ ಕತೆಯೊಂದನ್ನು ಚಿತ್ರೀಕರಿಸುತ್ತದೆ ಮತ್ತು ಹಾಗಾದ್ದರಿಂದ ಅದು ಎಲ್ಲ ವಯೋಮಾನದವರಿಗೂ ಮೆಚ್ಚುಗೆಯಾಗುವ ಸಾಧ್ಯತೆಯಿದೆ. ಅದರ ಸೂಕ್ಷ್ಮ ವ್ಯತ್ಯಾಸಗಳನ್ನು ಮತ್ತು ಸೊಗಸಾದ ಚಿತ್ರೀಕರಣವನ್ನು ಮನಗಾಣುವ ದಿಶೆಯಲ್ಲಿ ಪ್ಯಾರಾಸೈಟ್ ಚಲನಚಿತ್ರವು ಚಿತ್ರಮಂದಿರದಲ್ಲಿ ವೀಕ್ಷಿಸಲ್ಪಡಲು ನಿಜಕ್ಕೂ ಅರ್ಹವಾಗಿದೆ. ಚಲನಚಿತ್ರದ ಕುರಿತಾದ ಕೌತುಕವನ್ನು ಕಾಪಿಟ್ಟುಕೊಳ್ಳುವ ದಿಶೆಯಲ್ಲಿ, ಕಥಾಹಂದರವನ್ನು ಬಹಿರಂಗಗೊಳಿಸುವ ಬದಲು ಅದರ ಸಾರಾಂಶವನ್ನು ಹೇಳುವುದಾದರೆ; ಪ್ಯಾರಾಸೈಟ್ (ಚಲನಚಿತ್ರವು), ಪಾರ್ಕ್ ಕುಟುಂಬದ ಮತ್ತು ಕಿಮ್ ಎಂಬ ಓರ್ವ ನಿರುದ್ಯೋಗಿಯ ಕುಟುಂಬದ ನಡುವಿನ ಸಂವಹನದ ಕಥೆಯನ್ನು ಹೇಳುತ್ತದೆ. ತದ್ವಿರುದ್ಧವಾಗಿರುವ ಈ ಎರಡು ಕುಟುಂಬಗಳ ಪ್ರಪಂಚಗಳು ದೀರ್ಘಕಾಲೀನ ಪರಿಣಾಮಗಳೊಂದಿಗೆ ಘರ್ಷಿಸುತ್ತವೆ. [...] ಒಳಾಂಗಣ ಸ್ಥಳಾವಕಾಶದ ಪರಿಣಾಮಕಾರೀ ಬಳಕೆಯ ಜೊತೆಗೂಡಿ, ಪ್ರಕಾಶಮಾನವಾಗಿ ಬೆಳಗಿಸಲ್ಪಟ್ಟಿರುವ ಚಿತ್ರೀಕರಣಗಳ (ದೃಶ್ಯಗಳ) ಜೊತೆಗೆ, ಪ್ರೇಕ್ಷಕರ ಕುತೂಹಲವನ್ನು ಬಡಿದೆಬ್ಬಿಸುವಲ್ಲಿ ಬಾಂಗ್ ಜೂನ್-ಹೂ ಅವರು ಯಶಸ್ವಿಯಾಗಿದ್ದಾರೆ ಹಾಗೂ ಚಲನಚಿತ್ರದ 2 ಘಂಟೆ 12 ನಿಮಿಷದ ಅವಧಿಯ ಬಳಿಕ, ಬಹುತೇಕ ದೃಶ್ಯಾವಳಿಗಳು ಪಾರ್ಕ್ ಕುಟುಂಬದ ಮನೆಯಲ್ಲಿಯೇ ಸಂಭವಿಸುತ್ತವೆ ಎನ್ನುವುದನ್ನು ಮನಗಾಣಲು ಅಚ್ಚರಿಯೆನಿಸುತ್ತದೆ. ಕುತೂಹಲವನ್ನು ಕೆರಳಿಸುವಂತಹ ದೃಷ್ಟಿಕೋನದೊಂದಿಗೆ ಸಾಂಸಾರಿಕ ಜೀವನದ ಲೌಕಿಕ ಅಂಶಗಳನ್ನು ಪ್ರದರ್ಶಿಸಲಾಗಿದ್ದು, ಇದು ಬಾಂಗ್ ಜೂನ್-ಹೂ ಅವರ ಸಾಮರ್ಥ್ಯಕ್ಕೆ ಕನ್ನಡಿಯನ್ನು ಹಿಡಿದಂತಿದೆ. ಇದೊಂದು ಮಂದಗತಿಯ ಕುಲುಮೆಯಾಗಿದ್ದರೂ ಕೂಡ, ನೀವು ಅದರ ಸೌಂದರ್ಯವನ್ನು ಮತ್ತು ಕೌಶಲ್ಯಪೂರ್ಣತೆಯನ್ನು ಆಸ್ವಾದಿಸುವಿರಿ ಏಕೆಂದರೆ ಪ್ಯಾರಾಸೈಟ್ ಕೇವಲ ಒಂದೇ ಒಂದು ಹಂತದಲ್ಲಿ ಮಾತ್ರವೇ ನಿರ್ವಹಿಸುತ್ತದೆಯೆನ್ನುವುದನ್ನು ಮನಗಾಣಿಸುತ್ತದೆ ಆದರೆ ವಾಸ್ತವದಲ್ಲಿ ಅದು ಬಹು-ಪದರವುಳ್ಳದ್ದಾಗಿದೆ ಮತ್ತು ಸಹಾನುಭೂತಿ ಹಾಗೂ ದೈನ್ಯಭಾವಗಳೊಂದಿಗಿನ ಸಾಮಾಜಿಕ ವಾಸ್ತವವನ್ನು ಚಿತ್ರಿಸುತ್ತದೆ. ನಟವರ್ಗವು ವೀಕ್ಷಣೆಗೆ ಆಕರ್ಷಣೀಯವಾಗಿದೆ, ಪ್ರತೀ ಮುಖ ಚಲನೆ ಹಾಗೂ ಅಭಿನಯವು ಎದ್ದು ಕಾಣುವಂತಿದೆ, ಕೇವಲ ಮೆಟ್ಟಿಲುಗಳನ್ನು ಹತ್ತುವಂತಹ ಅಥವಾ ಇಳಿಯುವಂತಹ ನಟನೆಯೂ ಕೂಡ ಗುಪ್ತ ಅರ್ಥವನ್ನು ತಲುಪಿಸಬಲ್ಲಂತಿದ್ದು, ಕ್ಯಾಮೆರಾವು ಇದನ್ನು ವಿಭಜಿಸುತ್ತದೆ. ಅಸಾಮಾನ್ಯವಾದ ಕ್ಯಾಮೆರಾ ಕೋನಗಳೊಂದಿಗೆ ಮತ್ತು ಆ ಅನುಭವವನ್ನು ಹಂತಹಂತವಾಗಿ ಮೇಲಕ್ಕೆತುವಂತಹ ನಾಟಕೀಯ ಹವಾಮಾನ ಪರಿಸ್ಥಿತಿಗಳೊಂದಿಗೆ ಅಂತರಿಕ್ಷದ ಆ ಪರಿಣಾಮಕಾರೀ ಬಳಕೆಯ ಮೂಲಕವೂ ಕೂಡ ಅಸಹನೆಯ ಮಟ್ಟಗಳನ್ನು ಸೃಷ್ಟಿಸಲಾಗಿದೆ. ಪ್ಯಾರಾಸೈಟ್ಗೊಂದು ಅತಿವಾಸ್ತವಿಕವೆನ್ನುವಂತಹ ಸ್ವರೂಪವಿದ್ದು, ಅದರ ಸಂಗೀತ ರಚನೆಯು ಇದನ್ನು ಎತ್ತಿ ಹಿಡಿಯುತ್ತದೆ, ಹಾಗೂ ಇನ್ನಷ್ಟು ಹೇಳಬೇಕೆಂದರೆ ಚಲನಚಿತ್ರವು, ವೈಪರೀತ್ಯದ ಮೂಲಾಂಶಗಳನ್ನು ಅಳವಡಿಸಿಕೊಂಡಿದ್ದು ಇವುಗಳನ್ನು ಅದೆಂತಹ ಒಂದು ಕೌಶಲ್ಯಪೂರ್ಣ ರೀತಿಯಲ್ಲಿ ಯೋಜಿಸಲಾಗಿದೆಯೆಂದರೆ, ನಿಜಕ್ಕೂ ಅದು ಒಂದು ಸಿನಿಮೀಯ ಮೋಡಿಯೇ ಆಗಿದೆ. ಪ್ಯಾರಾಸೈಟ್ನ ಸುಸ್ಪಷ್ಟ ವಿಕಾರಳತೆಯು ಖಂಡಿತವಾಗಿಯೂ ನಿಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ ಹಾಗೂ ಚಲನಚಿತ್ರ ತಯಾರಿಕೆಯ ಟ್ವಿಲೈಟ್ ಝೋನ್ ಶಾಲೆಗೆ (ಟ್ವಿಲೈಟ್ ಝೋನ್ ಸ್ಕೂಲ್ ಆಫ್ ಫಿಲ್ಮ್ ಮೇಕಿಂಗ್) ಪರಕೀಯವೆಂಬಂತೆ ಕಾಣಲಾರದು. ಕಲಾವಿದರು ತೀರಾ ಅದ್ಭುತವೆನಿಸುವಂತಹ ಪ್ರತಿಭಾನ್ವಿತರಾಗಿದ್ದಾರೆ ಹಾಗೂ ಅಪ್ರಯತ್ನಪೂರ್ವಕವಾಗಿ ಪ್ರಶಾಂತರಾಗಿರುವಂತೆ ಕಾಣಿಸಿಕೊಳ್ಳುವ ವೇಳೆಗೇ, ಸಹಾನುಭೂತಿಯನ್ನು ಸೃಷ್ಟಿಸುವುದರ ಮೂಲಕ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿ-ವೂ ಮತ್ತು ಕಿ-ಜಿಯೋಂಗ್ ಕಿಮ್ ಅವರು ಪಾರ್ಕ್ ಕುಟುಂಬದ ಮನೆಯೊಳಗೆ ಖಾಸಗಿ ಮನೆಪಾಠ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ, ಅವರು ಖಂಡಿತವಾಗಿಯೂ ಈ ಮಟ್ಟದ ಪ್ರಶಾಂತತೆಯ, ಅಧಿಕಾರವನ್ನು ಅಭಿವ್ಯಕ್ತಿಗೊಳಿಸುವ ಸೂಕ್ಷ್ಮ ಮತ್ತು ಪರಿಣಾಮಕಾರೀ ವಿಧಾನದ ಪರಿಪೂರ್ಣ ಉದಾಹರಣೆಯೇ ಆಗಿರುತ್ತಾರೆ ಹಾಗೂ ಆ ಅನಿರ್ವಚನೀಯವಾದ, ಬಹುತೇಕ ಜನಪದೀಯ, ಮನೆಪಾಠ ತಂತ್ರಗಳ ನಿಯೋಜನೆಯೊಂದಿಗೆ ಇಂದ್ರಿಯಾತೀತವಾದ ಕಾಂತಿಯೊಂದನ್ನು ಸೃಷ್ಟಿಸಿದ್ದಾರೆ. ತೀರಾ ಸರಳವಾಗಿ ಹೇಳಬೇಕೆಂದರೆ, ಕಲಾವಿದರಾದ ಪಾರ್ಕ್ ಸೊ-ಡಾಮ್ ಮತ್ತು ಚೋಯಿ ವೂ-ಸಿಕ್ ಇವರು ಕ್ರಮವಾಗಿ ಕಿ-ವೂ ಮತ್ತು ಕಿ-ಜಿಯೋಂಗ್ ಪಾತ್ರಧಾರಿಗಳಾಗಿ ಪ್ಯಾರಾಸೈಟ್ ಅನುಸರಿಸುವ ವಿವಿಧ ದಿಕ್ಕುಗಳನ್ನು ವೀಕ್ಷಿಸಲೇಬೇಕೆನ್ನುವಂತೆ ಮಾಡುತ್ತಾರೆ ಹಾಗೂ ಅವರು ಈ ನಿರ್ವಹಣೆಗಳನ್ನು ಸುಲಲಿತವಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಹಾಗೂ ಆ ಮೂಲಕ ಪ್ರೇಕ್ಷಕರನ್ನು ತಮ್ಮ ಸಂಗಡವೇ ಇರುವಂತೆ ಆಹ್ವಾನಿಸುತ್ತಾರೆ. [...] ಪ್ಯಾರಾಸೈಟ್, ಅತ್ಯಂತ ಕೌಶಲ್ಯಪೂರ್ಣ ಚಿತ್ರೀಕರಣದ ಒಂದು ಅದ್ವಿತೀಯ ದೃಶ್ಯಕಾವ್ಯವಾಗಿದ್ದು, ಇದಂತೂ ನೋಡಲೇಬೇಕಾದ ಒಂದು ಚಲನಚಿತ್ರವಾಗಿದೆ, ಮತ್ತು ಹಾಗಾಗಿ ನಾನು ಈ ಚಲನಚಿತ್ರವನ್ನು ಯುಕೆ ಯಲ್ಲಿ ಅದರ ಸಾರ್ವತ್ರಿಕ ಬಿಡುಗಡೆಯ ದಿನಾಂಕದಂದು ಮತ್ತೊಮ್ಮೆ ವೀಕ್ಷಿಸಲು ಕಾತುರತೆಯಿಂದ ಎದುರು ನೋಡುತ್ತಿದ್ದೇನೆ. | Entry #37190 — Discuss 0 — Variant: Not specified
|